Saturday, 30 August 2008

ಶ್ರೀ ಶ್ರೀ ಶ್ರೀ ಪೂಜ್ಯಪಾದ ಸ್ವಾಮೀ ಶಂಕರಾನಂದಜಿಯವರ ಅಮರ ಸಂದೇಶ

ನಿತ್ಯ ಸುಖವನ್ನು ಕೊಡುವ ಹೆದ್ದಾರಿಗಳು

೧. ನೀವಾರೆಂದು ತಿಳಿಯಿರಿ

೨. ನಿಮ್ಮ ಕಾರ್ಯಕ್ರಮಗಳನ್ನು ಬುದ್ಧಿವಂತಿಕೆಯಿಂದ ತಯಾರಿಸಿರಿ

೩. ರಚನಾತ್ಮಕ ರೀತಿಯಿಂದ ವಿಚಾರ ಮಾಡಿರಿ

೪. ಅನ್ನಪಾನಾದಿಗಳಲ್ಲಿ ನೇಮವಿರಲಿ

೫. ವ್ಯಾಯಾಮ ಮಾಡುವುದನ್ನು ಬಿಡಬೇಡಿರಿ

೬. ಆಳವಾಗಿ ಉಸಿರನ್ನು ಎಳೆದುಕೊಳ್ಳಿರಿ

೭. ಪ್ರತಿದಿನ ಸ್ನಾನ ಮಾಡಿರಿ. ಸ್ನಾನ ಮಾಡುವಾಗ ಪರಮಾತ್ಮನನ್ನು ಜಪಿಸಿರಿ

೮. ಕೆಲಸವೂ ಮನಸ್ಸೂ ಒಂದಾಗಿರಲಿ

. ಸಮಯಕ್ಕೆ ಸರಿಯಾಗಿ ವಿಶ್ರಾಂತಿ ಪಡೆಯಿರಿ

೧೦. ಮುಕ್ತಹಸ್ತದಿಂದ ದಾನ ಮಾಡಿರಿ

೧೧. ನಗುವುದಾದರೆ ಮಿತವಾಗಿ ನಗಿರಿ

೧೨. ವೀರರಂತೆ, ಧೀರರಂತೆ, ಜ್ಞಾನಿಗಳಂತೆ ಬದುಕಿರಿ

೧೩. ಹಿಂದೆ ಮುಂದೆ ನೋಡಿ ಜಾಗರೂಕತೆಯಿಂದ ಆಚರಿಸಿ

೧೪. ಅನಿವಾರ್ಯವಾಗಿ ಆದ ತಪ್ಪನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಿರಿ

೧೫. ವಿವೇಕ ವಿಚಾರ ಪುಷ್ಟಿ ಮಾಡುವ ಪಾರಿಮರ್ಥಿಕ ಗ್ರಂಥಗಳನ್ನು ಓದಿರಿ

೧೬. ಹೇಳಬೇಕಾದ ಮಾತನ್ನು ಸಂಕ್ಷೇಪವಾಗಿ ಹೇಳಿರಿ

೧೭. ಯಾವುದನ್ನು ಆಳವಾಗಿ ಯೋಚಿಸಿರಿ

೧೮. ಮಾತನ್ನು ಗಮನವಿಟ್ಟು ಕೇಳಿರಿ

೧೯. ವಿಚಾರಪೂರ್ವಕವಾಗಿ ಗಂಡಾನ್ತರವನ್ನು ಎದುರಿಸಿರಿ

೨೦. ಮನಃಪೂರ್ವಕವಾಗಿ ಸೇವೆ ಮಾಡಿರಿ

೨೧. ಪರಮಾತ್ಮನನ್ನು ಹೃತ್ಪೂರ್ವಕವಾಗಿ ಪ್ರಾರ್ಥಿಸಿರಿ

೨೨. ಯೋಗ್ಯವಾದುದನ್ನೇ ಬಯಸಿರಿ

೨೩. ಏಕಾಗ್ರಚಿತ್ತದಿಂದ ಧ್ಯಾನ ಮಾಡಿರಿ

೨೫. ತಾಳ್ಮೆಯಿಂದ ನಿರೀಕ್ಷಿಸಿ

೨೬. ಮತ್ತೊಬ್ಬರನ್ನು ಹೋಗಳಬೇಕಾದರೆ ಪ್ರಾಮಾಣಿಕವಾಗಿ ಹೋಗಲಿರಿ

೨೭. ನಿರ್ಧಾರದಲ್ಲಿ ಧ್ರುಡತೆಯನ್ನು ಇಟ್ಟುಕೊಳ್ಳಿರಿ

೨೮. ಪ್ರಸನ್ನತೆಯಿಂದಾ ಸ್ವಾಗತಿಸಿ

೨೯. ನಿದ್ರೆ ಬರುವಷ್ಟು ಕಾಲ ಮಲಗಿರಿ

೩೦. ಬಂದ ಕೆಲಸವನ್ನು ಜಾಗ್ರತೆಯಿಂದ ಮುಗಿಸಿರಿ

೩೧. ಸಫಲತೆಯ ಬಾಗಿಲು ನಿಮಗಾಗಿ ತೆರೆದಿದೆ ಎಂಬುದನ್ನೂ ಮರೆಯಬೇಡಿರಿ

೩೨. ನೀವು ಎಷ್ಟು ಮುಂದುವರೆಯಬಲ್ಲಿರಿ, ಇತರರಿಗೆ ಎಷ್ಟು ಉಪಯೋಗಿಗಳಗಬಲ್ಲಿರಿ ಎಂಬುದಕ್ಕೆ ಮಿತಿಯಿಲ್ಲ; ಇದನ್ನು ಮರೆಯಬೇಡಿರಿ

೩೩. ನೀವು ಸಮಸ್ತ ಶಕ್ತಿಗಳ ಕೇಂದ್ರಸ್ಥಾನ

೩೪. ಶಕ್ತಿಗಳೆಲ್ಲವೂ ನಿಮಗೆ ಅಧೀನ

೩೫. ಆ ಶಕ್ತಿಗಳನ್ನು ನಿಮ್ಮ ಆತ್ಮೊದ್ಧಾರಕ್ಕಾಗಿ ಉಪಯೋಗಿಸಿಕೊಳ್ಳಿರಿ

ಈ ಮೇಲ್ಕಂಡ ಮೂವತ್ತೈದು ರತ್ನಗಳನ್ನು ಒಂದು ಹಾರ ಮಾಡಿಕೊಂಡು ಸದಾ ಮನಸ್ಸಿನಲ್ಲಿ ಧರಿಸಿಕೊಳ್ಳಿರಿ

No comments: